ಅಭಿಪ್ರಾಯ / ಸಲಹೆಗಳು

ಉತ್ಪಾದನಾ ಪದ್ಧತಿ ಮತ್ತು ಕಿರು-ಉದ್ದಿಮೆ ಆಧಾರಿತ ಚಟುವಟಿಕೆಗಳು

ಪೀಠಿಕೆ:

 

ಜಲಾನಯನ ಅಭಿವೃದ್ಧಿ ಯೋಜನೆಯಗಳ ಸಾಮಾನ್ಯ ಮಾರ್ಗಸೂಚಿ 2008ರಲ್ಲಿ ಉತ್ಪಾದನಾ ಪದ್ಧತಿ ಆಧಾರಿತ ಜೀವನೋಪಾಯ ಚಟುವಟಿಕೆಗಳನ್ನು ಒಂದು ಪ್ರಮುಖ ಘಟಕವನ್ನಾಗಿ ಒಳಗೊಂಡಿದೆ. ಒಟ್ಟು  ಯೋಜನಾ ವೆಚ್ಚದ ಶೇ.9 ರಷ್ಟು ಅನುದಾನವನ್ನು ಕಾರ್ಯಕ್ರಮದಡಿ ಜಮೀನು ಹೊಂದಿರುವ ರೈತರಿಗೆ ಉತ್ಪಾದನಾ ಪದ್ದತಿ ಮತ್ತು ಕಿರು-ಉದ್ದಿಮೆ ಚಟುವಟಿಕೆಗಳನ್ನು ಬೆಂಬಲಿಸಲು ನಿಗದಿಪಡಿಸಿದೆ. ಈ ಘಟಕವು ಒಟ್ಟಾರೆಯಾಗಿ ಕೃಷಿ ವ್ಯವಸ್ಥೆಯ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ವೈವಿದ್ಯಗೊಳಿಸಲು ಮತ್ತು ಗರಿಷ್ಠಗೊಳಿಸಲು ಉದ್ದೇಶಿಸಿದೆ ಹಾಗೂ ಭೂ ಹೀನ ಕೃಷಿ ಕಾರ್ಮಿಕರಿಗೆ Leased ರೈತರಿಗೆ ಮತ್ತು ಬೆಳೆಗಾರರಿಗೆ Cascading ಪ್ರಯೋಜನಗಳನ್ನು ಹೊಂದಿರುವ ಭೂ ಮಾಲಿಕರನ್ನು ಗುರಿಯಾಗಿಸುತ್ತಿದೆ.

 

ಉದ್ದೇಶಗಳು:

 

  1. ವೈವಿದ್ಯಮಯ ಉತ್ಪಾದನೆ / ಕೃಷಿ ಪದ್ಧತಿ ಆಧಾರಿತ ಜೀವನೋಪಾಯ ಚಟುವಟಿಕೆಗಳು / ಉಪಚಾರಗಳನ್ನು ಉತ್ತೇಜಿಸುವುದು.
  2. ಜೀವನೋಪಾಯ ವರ್ಧನೆಗಾಗಿ ಉನ್ನತ ಮಟ್ದದಲ್ಲಿ ಸಾಬೀತಾದ ತಂತ್ರಜ್ಞಾನಗಳ ಯಶಸ್ವಿ ಅನುಭವಗಳನ್ನು, ಸಮಗ್ರ ಕೃಷಿ ಪದ್ಧತಿ ಮತ್ತು ಸುಧಾರಿತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಉತ್ತೇಜಿಸುವುದು.

 

         ಅನುಷ್ಠಾನದ ಪ್ರಮುಖ ಅಂಶವೆಂದರೆ ಯೋಜನಾ ಹಂತದಲ್ಲಿಯೇ ಉತ್ಪಾದನೆ / ಕೃಷಿ ವ್ಯವಸ್ಥೆಗೆ ಸೂಕ್ಷ್ಮ ಮಟ್ಟದ ಯೋಜನೆಯನ್ನು ಒದಗಿಸುವುದು.

    

  1.  ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯಡಿ ಉತ್ಪಾದನಾ ಪದ್ಧತಿ ಮತ್ತು ಕಿರು-ಉದ್ದಿಮೆಗೆ ಸಂಬಂಧಿಸಿದ ಜೀವಾನೋಪಾಯ ಘಟಕವನ್ನು ಅನುಷ್ಠಾನಗೊಳಿಸುವುದು ಯೋಜನಾ ಅನುಷ್ಠಾನ ಅಧಿಕಾರಿಯ (PIA) ಜವಾಬ್ದಾರಿಯಾಗಿರತ್ತದೆ.
  2. ಯೋಜನೆಯ ಪೂರ್ವ ಸಿದ್ದತಾ ಹಂತದಲ್ಲಿ ಪ್ರತಿ ಕಿರು-ಜಲಾನಯನ ಪ್ರದೇಶದ ಅಡಿಯಲ್ಲಿ ಗ್ರಾಮ ಮಟ್ಟದಲ್ಲಿ ಭಾಗವಹಿಸುವ ರೀತಿಯಲ್ಲಿ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಮತ್ತು ಜಲಾನಯನ ಗ್ರಾಮದ ಅಸ್ಥಿತ್ವದಲ್ಲಿ ಜೀವನೋಪಾಯ ಬಂಡವಾಳನ್ನು ನಿರ್ಧರಿಸುವ ನೈಸರ್ಗಿಕ ಸಂಪನ್ಮೂಲಗಳ          ಸ್ಥಿತಿಯನ್ನು ಯೋಜನಾ ಅನುಷ್ಠಾನ ಅಧಿಕಾರಿ (PIA) ವಿಶ್ಲೇಸಿಸಬೇಕು. ಉತ್ಪಾದನಾ ಪದ್ಧತಿ ಮತ್ತು ಕಿರು ಉದ್ದಿಮೆಯಡಿಯಲ್ಲಿ ಅನುದಾನವನ್ನು ಪಡೆದುಕೊಳ್ಳಲು ಮಾಹಿತಿಯನ್ನು ಸಂಗ್ರಹಿಸಿ ವಿಸ್ತೃತ ಯೋಜನಾ ವರದಿಯಲ್ಲಿ ಅಳವಡಿಸಲು ಅನುಕೂಲವಾಗುವಂತೆ ಗ್ರಾಮೀಣ ಸಹಭಾಗಿತ್ವ            ಅಭ್ಯಾಸ (PRA Exercise), ನೆಟ್ ಪ್ಲಾನಿಂಗ್ ಮತ್ತು ಗುಂಪು ಚರ್ಚೆಯನ್ನು ಕೈಗೊಳ್ಳಲಾಗುವುದು.
  3. ಯೋಜನೆಯ ಎರಡನೇ ಕಂತಿನ ಅನುದಾನ ಬಿಡುಗಡೆಯಾಗುವ ಮೊದಲು ಯೋಜನಾ ಪ್ರದೇಶಕ್ಕೆ ಉತ್ಪಾದನಾ ಪದ್ಧತಿ ಮತ್ತು ಕಿರು-ಉದ್ದಿಮೆ ಚಟುವಟಿಕೆಗಳಾಧಾರಿತ ಜೀವನೋಪಾಯ ಚಟುವಟಿಕೆಗಳಾದ ಮೀನುಗಾರಿಕೆ, ತೋಟಗಾರಿಕೆ, ಕೃಷಿ, ಕೃಷಿ ಅರಣ್ಯ, ಪಶುಸಂಗೋಪನೆ, ಕಿರು-ಉದ್ಯಮ, ಕೃಷಿ ಸಂಸ್ಕರಣೆ, ಮೌಲ್ಯ ವರ್ಧನೆ, ಮಾರುಕಟ್ಟೆ ಇತ್ಯಾದಿಗಳಿಗೆ ಯೋಜನಾ ಅನುಷ್ಠಾನ ಅಧಿಕಾರಿ (PIA) ಯು ಕ್ರಿಯಾ ಯೋಜನೆ ತಯಾರಿಸಬೇಕು ಹಾಗೂ ಅದು  ವಿಸ್ತೃತ ಯೋಜನಾ ವರದಿಯ ಅವಿಭಾಜ್ಯ ಅಂಗವಾಗಿರಬೇಕು.
  4. ಇತರೆ ಯೋಜನೆಗಳಲ್ಲಿರುವ ಉತ್ಪಾದನಾ ವ್ಯವಸ್ಥೆ ಮತ್ತು ಕಿರು ಉದ್ಯಮಗಳ ಒಗ್ಗೂಡಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, ನರೇಗಾ, ಎನ್‍ಆರ್‍ಎಲ್‍ಎಂ, ಎನ್‍ಹೆಚ್‍ಎಂ, ಆರ್ಕೆವಿವೈ, ಎನ್‍ಎಫ್‍ಎಸ್‍ಎಂ ಮುಂತಾದ ಇತರ ಯೋಜನೆಗಳೊಂದಿಗೆ ಯೋಜನಾ ಅನುಷ್ಠಾನ ಅಧಿಕಾರಿ(PIA)ಯು      ನಿಕಟ ಸಹಯೋಗದೊಂದಿಗೆ ಕೆಲಸ ಮಾಡಬೇಕು. ಇದನ್ನು ಡಿಪಿಆರ್ ಒಗ್ಗೂಡಿಸುವಿಕೆ ಕ್ರಿಯಾ ಯೋಜನೆಯಲ್ಲಿ ಸರಿಯಾಗಿ ಪ್ರತಿಬಿಂಬಿಸಬೇಕು.
  5. ಉತ್ಪಾದನಾ ಪದ್ದತಿ ಮತ್ತು ಕಿರು ಉದ್ದಿಮೆಗಳ ಕ್ರಿಯಾ ಯೋಜನೆಯು ಸ್ಥಳ/ ರೈತರ ಕೇಂದ್ರೀಕೃತ ಚಟುವಟಿಕೆಗಳ ವೇಳಾಪಟ್ಟಿ ಮತ್ತು ಉಪಚಾರಗಳನ್ನು ಹೊಂದಿರಬೇಕು ಹಾಗೂ ನಕ್ಷೆಯಲ್ಲಿ ವಿವರಿಸಿರಬೇಕು.
  6. ಕ್ರಿಯಾ ಯೋಜನೆಯ ಒಂದು ಪ್ರತಿಯು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಲಭ್ಯವಾಗುವಂತೆ ಮಾಡಬೇಕು.
  7. ಯೋಜನೆ ಅನುಷ್ಠಾನ ಅಧಿಕಾರಿ (PIA)ಯು ಕ್ರಿಯಾ ಯೋಜನೆಯನ್ನು ಅಗತ್ಯವಿದ್ದರೆ ಪರಿಶೀಲಿಸಬಹುದು ಹಾಗೂ stakeholders ಜೊತೆ ಸಮಾಲೋಚಿಸಿ ಪರಿಷ್ಕರಿಸಬಹುದು.

                 

ಉತ್ಪಾದನಾ ಪದ್ದತಿಯ ಕಾರ್ಯಾಚರಣೆಯ ವಿಧಾನ ಮತ್ತು ಅನುದಾನವನ್ನು ಪಡೆಯಲು ಬೇಕಾಗುವ ಅರ್ಹತೆ:

 

  1. ಭೂಮಿಯನ್ನು ಹೊಂದಿರುವ ಪ್ರತಿಯೊಬ್ಬ ರೈತನೂ ಉತ್ಪಾದನಾ ಪದ್ದತಿಯ ಪ್ರಯೋಜನವನ್ನು ಪಡೆಯಬಹುದು. ಗ್ರಾಮೀಣ ಸಹಭಾಗಿತ್ವ ಅಭ್ಯಾಸ (PRA -Participatory rural appraisal exercise)ವನ್ನು ಮಾಡಿದಾಗ ಲಭ್ಯವಾಗುವ ಆದಾಯ ಶ್ರೇಯಾಂಕದ ಆಧಾರದ ಮೇಲೆ            ಸಣ್ಣ ಮತ್ತು ಅತೀ ಸಣ್ಣ ರೈತರು, ರೈತ ಮಹಿಳೆಯರು, ಪರಿಶಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ರೈತರಿಗೆ ಆಧ್ಯತೆಯನ್ನು ನೀಡಬೇಕು. ಯಾವ ಜಮೀನು ಅಭಿವೃದ್ಧಿ ಹೊಂದಿದ ನೈಸರ್ಗಿಕ ಸಂಪನ್ಮೂಲಗಳಿಗೆ ಸಮೀಪದಲ್ಲಿದೆಯೋ ಅಂತಹ ಭೂಮಿಯನ್ನು ನೈಸರ್ಗಿಕ ಸಂಪನ್ಮೂಲ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಆಧ್ಯತೆ ನೀಡಬಹುದು.
  2. ಜಲಾನಯನ ಸಮಿತಿಯೊಂದಿಗೆ ಸಮಾಲೋಚಿಸಿ ಯೋಜನಾ ಅನುಷ್ಠಾನ ಅಧಿಕಾರಿ (PIA) ರವರು ಫಲಾನುಭವಿಗಳನ್ನು ಆಯ್ಕೆ ಮಾಡುವರು.
  3. ತಮ್ಮ ಸಂಪನ್ಮೂಲಗಳನ್ನು ಸಂಗ್ರಹಿಸಲು ಮತ್ತು ನಿರ್ವಹಿಸಲು ಸಾಮಾನ್ಯ ಆಸಕ್ತಿಯನ್ನು ಹೊಂದಿರುವ ಫಲಾನುಭವಿಗಳನ್ನು ಬಳಕೆದಾರರ ಗುಂಪುಗಳಾಗಿ ಸಂಘಟಿಸಬಹುದು ಹಾಗೂ ಈ ಗುಂಪುಗಳು ತಮ್ಮ ನೈಸರ್ಗಿಕ ಸಂಪನ್ಮೂಲವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಪರಿಣಾಮಕಾರಿ          ವಿಲೇವಾರಿ ಮತ್ತು ಮಾರುಕಟ್ಟೆಗಾಗಿ ತಮ್ಮ ಉತ್ಪನ್ನಗಳನ್ನು ಒಗ್ಗೂಡಿಸಬಹುದು. ಇದರಿಂದಾಗಿ equity ಮತ್ತು ಸುಸ್ಥಿರತೆಯ ಆಧಾರದ ಮೇಲೆ ಸಂಪನ್ಮೂಲ ಬಳಕೆಯ ವ್ಯವಸ್ಥೆಗಳನ್ನು ನಿರ್ಧರಿಸಲು ಒಂದು ಮಾರ್ಗವನ್ನು ಸಹ ಒದಗಿಸಬಹುದು.
  4. ಹೆಚ್ಚು ಹಣ ತಗಲುವ ಕೃಷಿ ಪದ್ಧತಿ ಆಧಾರಿತ ಜೀವನೋಪಾಯ ಚಟುವಟಿಕೆಗಳಾದ /ಉಪಚಾರಗಳಾದ ಮೀನುಗಾರಿಕೆ, ಕೃಷಿ, ತೋಟಗಾರಿಕೆ, ಕೃಷಿ ಅರಣ್ಯ, ಪಶುಸಂಗೋಪನೆ, ಕೃಷಿ ಸಂಸ್ಕರಣೆ, ಮೌಲ್ಯ ವರ್ಧನೆ ಇತ್ಯಾದಿಗಳಿಗೆ ಅನುದಾನವನ್ನು ನೀಡಲಾಗುವುದು.
  5. ಸಾಮಾನ್ಯ ವರ್ಗದ ರೈತರು ಶೇ.20 ರಷ್ಟು, ಪರಿಶಿಷ್ಠ ಜಾತಿಯ ಮತ್ತು ಪರಿಶಿಷ್ಠ ಪಂಗಡದ ರೈತರು ಶೇ.10 ರಷ್ಟು ರೈತರ ವಂತಿಗೆಯನ್ನು ಭರಿಸುವುದು. ಉತ್ಪಾದನಾ ಚಟುವಟಿಕೆಯ ವೆಚ್ಚದ ಗರಿಷ್ಠ ಮೊತ್ತವನ್ನು ಜಲಾನಯನ ಅಭಿವೃದ್ಧಿ ಯೋಜನೆಯ ಅನುದಾನದಿಂದ ಪೂರೈಸಲಾಗುತ್ತದೆ       (ರೂ. 12,000/15,000 ಪ್ರತಿ ಹೆಕ್ಟೇರಿಗೆ ಆಯಾ ಪ್ರದೇಶಕ್ಕೆ ಸಂಬಂಧಿಸಿದಂತೆ)
  6. ರೈತರ ವಂತಿಗೆ -ಸಾಮಾನ್ಯ ವರ್ಗದ ರೈತರು ಶೇ.20 ರಷ್ಟು, ಪರಿಶಿಷ್ಠ ಜಾತಿಯ ಮತ್ತು ಪರಿಶಿಷ್ಠ ಪಂಗಡದ ರೈತರು ಶೇ.10 ರಷ್ಟು (ಗರಿಷ್ಠ ರೂ.4800/6000 ಮತ್ತು ರೂ 2400/3000 ಆಯಾ ಪ್ರದೇಶಕ್ಕನುಗುಣವಾಗಿ ಸಾಮಾನ್ಯ ಮತ್ತು ಪ.ಜಾ/ಪ.ಪಂ ದ ಫಲಾನುಭವಿಗಳಿಗೆ            ಕ್ರಮವಾಗಿ) ಮೊತ್ತವು ಜಲಾನಯನ ಅಭಿವೃದ್ಧಿ ನಿಧಿಗೆ ಹೋಗುತ್ತದೆ/ಸೇರ್ಪಡೆಯಾಗುತ್ತದೆ.
  7. ರೈತರ ವಂತಿಕೆಯನ್ನು ಕೆಲಸ/ಚಟುವಟಿಕೆಗಳನ್ನು ಕಾರ್ಯಗತಗೊಳಿಸುವ ಸಮಯದಲ್ಲಿ ನಗದು ರೂಪದಲ್ಲಿ ಪಡೆದು ಜಲಾನಯನ ಅಭಿವೃದ್ಧಿ ನಿಧಿಗೆ ಜಮಾ ಮಾಡುವುದು.

  

ಉತ್ಪಾದನಾ ಪದ್ಧತಿ ಮತ್ತು ಕಿರು ಉದ್ದಿಮೆಯಡಿ ತೆಗೆದುಕೊಳ್ಳಬಹುದಾದ ವಿವಿಧ ಚಟುವಟಿಕೆಗಳೆಂದರೆ- ವಿವಿಧ ಕೃಷಿ ಆಧಾರಿತ ಬೆಳೆ ಪದ್ದತಿಗಳು, ತುಂತುರು ನೀರಾವರಿ ಅಳವಡಿಕೆ, ತೋಟಗಾರಿಕೆ ಆಧಾರಿತ ಬೆಳೆ ಪದ್ದತಿ, ಡ್ರಂ ನೀರಾವರಿ ಪದ್ದತಿ, ವಾಟರ್ ಬ್ಯಾಗ್ ಡ್ರಿಪ್ ಕಿಟ್, ಜೇನು ಸಾಕಣೆ, ಕೃಷಿ ಅರಣ್ಯ, ಜಾನುವಾರು ಆಧಾರಿತ ಕೃಷಿ ಪದ್ದತಿ( ಟ್ರೇವಿಸ್, ಮೇವಿನ ಕಿರು ಚೀಲ, ಅಜೋಲ್ಲ ಉತ್ಪಾದನೆ, ಮಾದರಿ ದನದ ಕೊಟ್ಟಿಗೆ, ಸೈಲೇಜ್ ಘಟಕ, ಮೇವು ಕಟಾವು ಯಂತ್ರ), ಮೀನುಗಾರಿಕೆ ಆಧಾರಿತ ಕೃಷಿ ಪದ್ದತಿ.

ಇತ್ತೀಚಿನ ನವೀಕರಣ​ : 19-11-2019 03:34 PM ಅನುಮೋದಕರು: Suma S M


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080